ಹಳ್ಳೇಗೆ ಅಂಗೈಲಿ ವೈಕುಂಠ ತೋರಿದ ಕೊಮಾಸಾಮಿ

ದಲಿತ್ರಕಂಠ(ದನಿ) ಹಳ್ಳಿಗರನೆಂಟ ಬಡವರ ಭಂಟ ಇತ್ಯಾದಿ ಸ್ವಯಂಘೋಷಿತ ಸಿ‌ಎಂ ಕೊಮಾಸಾಮಿಯ ಹಳ್ಳಿಹಳ್ಳಿ ಟೂರಿಂಗು ದಲಿತರ ಮನೆಯಾಗೆ ಸ್ಲೀಪಿಂಗು ದೊಡ್ಡ ಜಾತೇರಮನೆ ಫುಡ್ ಈಟಿಂಗ್ ಸ್ಥಳದಾಗೇ ಹಳ್ಳೇರ ಪ್ರಾಬ್ಲಮ್ಸ್ ಲಿಸನಿಂಗು ಇದರಿಂದಾಗಿ ಯಾರು ಯಾಗೆ ಅದೇಟು ಲಾಭವಾತೋ ತಿರುಪತಿ ತಿಮ್ಮಪ್ಪನೇ ಬಲ್ಲ. ಅದ್ರೆ ಸಿ‌ಎಂ ಹಳ್ಳಿಗೆ ಬತ್ತಾರೆ ಅಂತ ಸುದ್ದಿ ಹಬ್ಬುತ್ಲು ಮೊದ್ಲು ವಿಸಿಟ್ಟು ಕೊಟ್ಟೋರು ಅಧಿಕಾರಿಗಳು! ಕೊರಕಲ ಹಾದಿಗೆ ಜಲ್ಲಿ ಮಣ್ಣು ಹೊಡ್ಸಿ ರೋಡ್ ರಿಪೇರಿ ಮಾಡಡೋದೇನು! ದಾರಿಗುಂಟ ಕಂಬ ನೆಟ್ಟು ಕಲರ್ ಬಂಟಿಗ್ಸು ಕಟ್ಟಿ ಬಾಳೆಕಂದು ನೆಡ್ಸಿ ಮಾವಿನ ಸೊಪ್ಪು ಇಳಿ ಬಿಡ್ಸಿ ಸೀರಿಯಲ್ ಬಲ್ಬುಗಳು ನೇತು ಹಾಕ್ಸಿ ಸಿಂಗಾರ ಮಾಡೋದೇನು. ಸಿ‌ಎಂ ಸಾಯೇಬ್ರು ಯಾವ ದಲಿತನ ಮನೆಯಾಗೆ ತಳ ಊರಿದ್ರೆ ಪಸಂದು ಅಂತ ಪರಿಸೀಲ್ನೆ ಮಾಡಿ ಇದ್ದುದ್ರಾಗೆ ಚಲುವಯ್ಯನ  ಮನೆನೇ ಕರಿ ಹೆಂಚು ಹೊದ್ಕಂಡು ಪಸಂದಾಗೈತೆ ಅಮ್ತ ಸೆಲೆಕ್ಟ್ ಮಾಡಿ ಒಡೆದ ಹೆಂಚೆಲ್ಲಾ ತೆಗ್ಸಿ ಹೊಸಾವ ಹೊದ್ದಿಸಿ, ಆ ಮನಿಗೆ ಸುಣ್ಣ ಬಣ್ಣ ಕಾಣ್ಸಿ ನೆಲಕ್ಕೆ ಸಾರಣೆ ಮಾಡ್ಸಿ, ಹಿತ್ತಲ ಕೊಚ್ಚೆ ಕಸ ಎತ್ತಿ ಹಾಕ್ಸಿ, ಅಡಿಗೆ ಮನಿಯಾಗಿರೋ ಒಡೆದ ಮಡಿಕೆ ಕುಡಿಕೆ ಮುಚ್ಚಿ ಇಕ್ಕಿಸಿ. ಸಿಲವರ್ ಪಾತ್ರೆ ಕೊಡ್ಸಿ, ದಿನಕ್ಕಾಗೋವಷ್ಟು ರೇಸನ್ ಕೊಡ್ಸಿ, ಹಳೆವೈರಿಂಗ್ ಕಿತ್ತು ಹೊಸ ವೈರಿಂಗ್ ಮಾಡ್ಸಿ ನಲವತ್ತು ಕ್ಯಾಂಡಲ್ ಬಲ್ಬು ಬಿಸಾಕಿ ನಾಕು ಟ್ಯೂಬ್‍ಲೇಟ್ ನೇತುಹಾಕ್ಸಿ ಮನೆಯಾಗೆ ಬೆಳದಿಂಗಳ ಮೂಡಿಸೋದ್ರಾಗೆ ಅಧಿಕಾರಿಗೋಳು ಸುಸ್ತು. ಸಾಯೇಬ್ರು ಉಣ್ಣಾದೆಲ್ಲಿ? ಉಣ್ಣಾದೇನು? ಬೆಳಗಾಗುತ್ಲುವೆ ಅನ್‍ಲೋಡಿಂಗ್ ಮಾಡೋದೆಲ್ಲಿ? ಧಣಿ ಚೆರಿಗಿ ಹಿಡ್ಕೊಂಡು ಕರೆತಾವ ಹೊಂಡ್ಲಿಕ್ಕಾದೀತೆ? ಈ ಬಗ್ಗೆ ಕಿರಿಹಿರಿ ಆಫೀಸಸ್ ಸೇಕಂಡು ಮೀಟಿಂಗ್ ನಡೆಸಿದ್ದಾತು. ದಡದ ಕಲ್ಲಳ್ಳಿ ದಲಿತ ಚೆಲುವಯ್ಯ ದರಿದ್ರ ನನ್ಮಗ. ಸಿ‌ಎಂ ಮತ್ತವರ ಜೊತೆನಾಗೆ ಬರೋ ದಂಡುದಳ ಮಂದಿ ಮಾರ್ಬಲಕ್ಕೇನು ಅಡಿಗೆ ಮಾಡಿಸ್ಯಾನು? ಪಾರ್ಟಿ ಲೀಡರ್ ಈರಸೈವರ ಮನೆಯಾಗೆ ಅಡಿಗೆ ಚಾಲೂ ಮಾಡ್ಕಳಿ ಅಮ್ತ ಆದೇಸ ಹೊರಡಿಸಿದರು. ಬರೋ ಸೂಟುಬೂಟು ಖಾದಿ ಸರದಾರರಿಗೆ ಪಾಯಸ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಗೀರೈಸ್ ಅನ್ನಸಾಂಬಾನ ಲೋ ಬಜೆಟ್ ಫುಡ್ ಮಾಡ್ಸಿ ಅಂತ ಪಟ್ಟಿ ರಿಲೀಜ್ ಮಾಡಿದರು. ಅನ್ ಲೋಡಿಂಗ್ ವ್ಯವಸ್ಥಗೆ ಮೂವಬಲ್ ಫ್ಲಶ್ಶು ಬಾತ್ ರೂಮ್ ತರಿಸಿ ಇಕ್ಕಿದರು. ಹಳ್ಳಿನಾಗ್ಳ ನಲ್ಲಿನಾಗೆ ನೀರು ಬರಾಕಿಲ್ವೆ? ಕರೆಂಟು ಕಂಬಗಳಿವೆ ಕರೆಂಟಿಲ್ವೆ? ಒಂದೆ ಎಲ್ಡೆ ಹಳ್ಳಿ ಪ್ರಾಬ್ಲಮ್ಸ್. ಎಲ್ಲಾ ನಲ್ಲಿಯಾಗೆ ಒಂದಿನ ನೀರು ಬಿಡೋ ಕೇಳ್ರಿ ಹಂಗೆ ಬೆಸ್ಕಾಂ ಬೇಕೂಪರಿಗೆ ಕರಂಟು ಬಿಡಕೇಳ್ರಿ. ಆಲ್ಡರ್ ಮಾಡಿದರು ಆಫೀಸೋಸು. ಚೆಲುವಯ್ಯ ಪಟಾಪಟಿ ಕೊಳಕು ಚಡ್ಡಿ ಅಂಗಿನಾಗಿದ್ದ. ತಗೋ ಒಂದು ರಿನ್ ಸಾಬೂನು ಈವತ್ತೆ ಬಟ್ಟೆ ಹೊಕ್ಕ. ಮೀನಮ್ಮ. ನಿನ್ನ ಸೀರೆ ಕುಬಸಾನೂ ಹೊಕ್ಕ ತಾಯಿ ಅಂದರು. ಕಿಲೀನ್ ಆಗಿರಬೇಕು ಅಂತೇಳಿ, ಮೈ ತೊಳ್ಕರೀ ಅಮ್ತ ಸಿಲಿಮಾ ತಾರೆಯರ ಸೌಂದರ್ಯ ಸಾಬೂನಾದ ಒಂದು ಲಕ್ಸ್ ಮತ್ತು ಒಂದು ಸ್ಯಾಂಪು ಪಾಕಟ್ಟೆ ಮಂಜೂರಾತಿ ನೀಡಿದರು. ಮತ್ತೇನೇನು ಮಾಡಬೇಕ್ರಪ್ಪಾ ಎಂದು ಆಫೀಸಸ್ ಪರಪರನೆ ತಲೆಕೆರ್ದು ಹೇನು ಸುರಿಸಿದರು. ಸಾಯೇಬ್ರಿಗೆ ಸಿಕ್ಕಾಪಟ್ಟೆ ಅರ್ಜಿನಾ ಗ್ರಾಮದೋರು ಕೊಟ್ಟೇ ಕೊಡ್ತಾರೆ ಆ ರಾಶಿನಾ ಎಲ್ಲಿ ಹಾಕೋದು? ಮತ್ತೊಂದು ಪ್ರಾಬ್ಲಂ ಎದುರಾತು ‘ಕಾರಿನ ಡಿಕ್ಕಿನಾಗೆ ಹಾಕಿದ್ರಾ ತೇಳಿಪಾ’ ಅಂತ ಡ್ರೈವರ್ ಕಿಸಕ್ಕನೆ ನಕ್ಕ. ಮಲಗಾಕೆ ಚಿಕ್ಕಕಾನ್ಯಕ್ಕೆ ವಿಸೀಟ್ ಕೊಟ್ಟಾಗ ಬೆಡ್ಡು ರಗ್ಗು ಬೆಡ್ ಶೀಟು ತರಿಸಿದ್ದೆವಲ್ರಿ, ಅದೆಲ್ಲಿ ಅಂದನೊಬ್ಬ. ನಮ್ಮವನೇ ಒಬ್ಟ ಎತ್ ಹಾಕ್ಕೊಂಡೋದ. ಹಂಗಾರೆ ಹೊಸಾವು ಪರ್ಚೇಸ್ ಮಾಡಿ ಖರ್ಚು ಹಾಕ್ಸಿ. ಹಂಗೆ ನಾಳೆ ನಾಕು ನೂರು ಮಂದ್ಯಾರ ಸೇರತವೆ. ಅವಕ್ಕೆಲ್ಲಿ ಲಾಡ್ಜಿಂಗ್? ಅವರೆಲ್ಲಾ ಯಾವುದಾರ ಇಸ್ಕೊಲ್ನಾಗೆ ಮಲಿಕ್ಕತಾರೇಳ್ರಿ. ಅಷ್ಟಕ್ಕೆ ಸಿ‌ಎಂ ಇಲ್ಲಿರೋತಂಕ ನಮಗೆಲ್ಲಿ ನಿದ್ದೆ. ಆವಯ್ಯ ಬರೋದೇ ಮಿಡ್
ನೈಟಿಗೆ. ಆಮೇಲೆ ಮೀಟಿಂಗು ಈಟಿಂಗು ಮಲಗೋಣ ಅನ್ನೋದ್ರಾಗೆ ಕೋಳಿ ಕೂಗ್ತದಷ್ಟೆ. ಸೆಕ್ಯೂರಿಟಿ ಪ್ರಾಬ್ಲಂನಾಗೆ ಎಲ್ಲಿ ಬಂದೀತ್ರಿ ನಿದ್ದಿ?  ಹೊಸಾ ಇಸ್ಪೀಟು ಪ್ಯಾಕ್ ಒಂದಷ್ಟು ತರ್ಸಿ ಬಿಡ್ರಿ ಅಂದನೊಬ್ಬ ಅಧಿಕಾರಿ. ಮತ್ತೆ ಗುಂಡು? ಮತ್ತೊಬ್ಬ ಹಲ್ಲುಗಿಂಜಿದ. ಉಳಿದವರ ಹಲ್ಲುಗಳೂ ಫಳಫಳಿಸಿದವು.

ಸಿ‌ಎಂ ಬರೋದಿನ ಹಾಡುಹಗಲೇ ಬೀದಿ ದೀಪಗಳು ಬೆಳಗಿದವು. ಸೀರಿಯಲ್ ಬಲ್ಬ್ ಗಳು ಥಳ ಥಳಿಸಿದವು. ಬಿರಟೆ ಇಲ್ಲದ ನಲ್ಲಿಗಳು ನೀರು ಸುರಿಸಿದವು. ರಸ್ತೆಗಳು ಧೂಳು ಜಾಡಿಸಿಕೊಂಡವು. ಮೈಕುಗಳಲ್ಲಿ ಸಿನಿಮಾ ಸಾಂಗು. ಇರೋ ಎಲ್ಡ್ ಗುಡಿನಾಗೆ ದೂಪದೀಪ ಪೂಜೆ ಪುನಸ್ಕಾರ ಕಂಡವು ದಡದಕಲ್ಲಳ್ಳಿ ತನ್ನ ದರಿದ್ರ ಮರೆತು ಇಂದ್ರನಗರಿಯಂತೆ ಮಿರಿಮಿರಿ ಮಿಂಚಿತು. ಅಕ್ಕಪಕ್ಕದ ಹಳ್ಳಿ ಡಾಕಟ್ರು ಸ್ಟೆತೋಸ್ಕೋಪ್ ಹಿಡ್ದು ಓಡಿಬಂದು ಹಳ್ಳಿಗರ ಕಾಯಿಲೆ ಕಸಾಲೆ ಇಚಾರ್ಸಿ ಸೂಜಿ ಚುಚ್ಚಿ, ಮಾತ್ರೆ ನುಂಗ್ಸಿ ‘ನಾವೆಲ್ಲಾ ಹೆಲ್ತಿ ಆಗಿದೀವಿ’ ಅಮ್ತ ಯೇಳ್ರಪಾ ಅಂತೇಳಿ ಕಂಠಪಾಠ ಮಾಡಿಸಿದರು. ಮಧ್ಯರಾತ್ರಿ ಸಿ‌ಎಂ ಅವರ ದಂಡುದಳ ಬಂತು. ಚೆಲುವಯ್ಯ ಹಾಸಿದ ಕಂಬಳಿಮ್ಯಾಗೆ ಕುಂತು ಸಿಯಮ್ಮು ಹಲ್ಟೆ ಹೊಡೆದರು. ದೆವ್ವ ತಿನ್ನೋ ಹೊತ್ನಾಗೆ ಈರಶೈವರ ಮನೆಯಾಗಿಂದ ಉಪ್ಪು ಸಾರು ಮುದ್ದೆ ತರ್ಸಿ ಸಿ‌ಎಂ ಅಂಡ್ ಪಾರ್ಟಿ ಚಪ್ಪರಿಸಿ ಹೊಡೀತು. ನಿಟ್ಟುಸಿರು ಬಿಡುತ್ತಾ ಚಲುವಯ್ಯ ಮೀನಮ್ಮ ತಾವೇ ಮಾಡಿದ ಆಡಿಗಿ ತಾವೇ ಉಂಡ್ರು. ಕೊಮಾಸಾಮಿ ಕರ್ಲಾನ್ ಬೆಡ್ಡು ಸೇರಿ ರಗ್ಗು ಹೊದ್ದ ಮ್ಯಾಗೇ ಗಂಡ ಹೆಂಡ್ರು ಉಸಿರು ತಿರುಗಿಸ್ಕ್ಯಂಡಿದ್ದು.

ಬೆಳಿಗ್ಗೆ ಏಳುತ್ಲು ಅನ್ ಲೋಡಿಂಗ್ ಮಾಡಿ ವಾಕ್ ಮಾಡೋ ನೆಪದಾಗೆ ಹಳ್ಳಿ ಸುತ್ತಿ ಬಡವರ್ತಾವ ಅರ್ಜಿ ಈಸ್ಕೊಂಡು ಅಹವಾಲು ಕೇಳಿ ಅಧಿಕಾರಿಗಳ ಕೈನಾಗೆ ಅರ್ಜಿಗುಳ್ಳ ಇಕ್ಕಿ, ಈರಸೈವ ಲೀಡರ್ ಮನೆಯಾಗೆ ಜಳ್ಕ ಮಾಡಿ ಬ್ರೇಕ್ ಫಾಸ್ಟ್ ಜಡ್ದು, ಬಿಸಿಲೇರಿ ಕುಡ್ದು ಗುಡಿಗೋಗಿ ಗಾಡ್ಗೆ ಅಡ್ಡಬಿದ್ದು ಪೋಲಿಸರ್ತಾವ ಸೆಲ್ಯೂಟ್ ಹೊಡಿಸ್ಕೊಂಡು  ಆವಅಣ್ದಾಗೆ ಸಸಿನೆಟ್ಟು ಬೆಲುವಯ್ಯನ ಮನೀಗೆ ಬಂದ್ರೆ ಮುಕರಿಕೊಂಡಿದ್ದ ಜನ ಹೋಸ್ಟ್ ಚಲುವಯ್ಯನ ಗೋಳು ಕೇಳಾಕೆ ಬಿಡವಲ್ಲರು. ಎಲ್ಲೆಲ್ಲೂ ಕೂಗಾಟ ಚೀರಾಟ ಕಿರಿಚಾಟ ಅರಚಾಟಗಳ ನಡುವೆಯೇ ಗೂಟದ ಕಾರು ಏರಿದ ಕೊಮಾಸಾಮಿ ಎಂಬ ಮಣ್ಣಿನ ಮೊಮ್ಮಗ ಮಾಯವಾಗುತ್ತಲೇ ಬಂದ ದಂಡುದಳ ಮಂದಿ ಮಾರ್ಬಲ ಎಲ್ಲಾ ಮಾಯ! ಕರ್ಲಾನ್ ರಗ್ಗು ದಿಂಬು ಮಾಯ. ಬೀದಿ ದೀಪ ಸೀರಿಯಲ್ ಸೆಟ್ಟು ಬೀದಿನೇ ಮಾಯ. ನಲ್ಲಿಯಾಗೆ ಸುರೀತಿದ್ದ ನೀರು ಮಾಯ. ಟೆಂಪರರಿ ಫ್ಲಶ್ಶು ಔಟು ಬಾತ್ ರೂಮು ಎಲ್ಲಾ ಮಾಯವೋ ಪ್ರಭುವೇ ಎಲ್ಲಾ ಮಾಯವೋ! ಈಗ ಕೇಳ್ತಿರೋ ಕೂಗು ಒಂದೆ. ‘ದಲಿತ್ರ ಮನೆಯಾಗಿದ್ದೂವೆ ಉಣ್ಣದಂಗೆ ತಿನ್ನದಂಗೆ ಅಪಮಾನ
ಮಾಡಿದ ದಲಿತ ಇರೋಧಿ ಸಿ‌ಎಂಗೆ ಧಿಕ್ಕಾರ.’ ಇತ್ತೀಚಿಗೆ ಮದರಸ್ದಾಗೆ ಮಕ್ಕಂತೀನಿ ಅಮ್ತ ಸಿ‌ಎಂ ಸಿಡುಕುತ್ಲು ಇದನ್ನ ಕೇಳಿ ಜಾಗೃತರಾದ ಸಾಬಿಗಳು, ನಮ್ಮ ಮದರಸ್ದಾಗೆ ಉಗ್ರಗಾಮಿಗಳಿಗೆ ಜಾಗ ಕೊಡ್ತೀವಿ ಅಂತ ಡೆಲ್ಲಿನಾಗೆ ಬೊಗಳಿದ ನಮಕ್‍ಹರಾಮ್ ಸಿ‌ಎಂಗೆ ‘ನೋ ಎಂಟ್ರಿ’ ಅಂತ ರಾಂಗ್ ಆದ ಸುದ್ದಿ ಹಬ್ಬೇತ್ರಿ……. ಮುಂದೆ?

ಒತ್ತಡ ನಿವಾರಣೆಗಾಗಿ ಮತ್ತೆ ಗೋಲ್ಡ್  ಸ್ಪಾ ರೆಸಾರ್ಟ್ ಗೆ ಸಿ‌ಎಂ ದಾಖಲೆ!
*****
(ದಿ. ೨೮-೦೯-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿವತತ್ತ್ವರತ್ನಾಕರ : ಕನ್ನಡ ನೆಲದ ಹೆಮ್ಮೆ
Next post ಗೇಶಾ ಹುಡುಗಿ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys